Kendra Bindu, by Dr. Bhat

ಕೇಂದ್ರ ಬಿಂದು

 

ಬಿಂದು ಕೇಂದ್ರ ಬಿಂದು ಯಂದ್ಯಂದು

ಅಂದು ಇಂದು ಮುಂದು ಒಂದೆ ಬಿಂದು||

 

ವ್ಯಾಸವೆರಡು ಜೋಡು ಪರಸ್ಪರ ಕೂಡು

ವೃತ್ತ ನಡುವೆ ನೋಡು ಅಲಂಕೃತ ಬಿಂದು||

 

ಸ್ಪರ್ಶ ರಹಿತ ದೂರದಿ ಪರಿಧಿ ವಿಸ್ತರಧಿ

ಸ್ವಾಕರ್ಶ  ಗುರುತ್ವಾಕರ್ಷ ತನ್ನೆಡೆ  ಬಿಂದು||

 

ಬಿಂದು ರಹಿತ ಸ್ತಗಿತ ವೃತ್ತ ಅಸ್ತವ್ಯಸ್ತ 

ಬಿಂದುವಿಂದ ಬಂದು ಅದರಲಿ ಪುನಃ ಸಂದು||

 

ಗೋಲ ಭೂಗೋಲ ವಿಶ್ವ ವಿಶಾಲ ಸಾಲ

ಅಕಾರ ಉಕಾರ ಮಕರ ಒಂಕಾರ ಬಿಂದು||

 

ಜೀವ ಮೂಲ ಆಧಾರ ದಾರ ಜೀವಾಧಾರ

ಅದರ ಇದರ ಸರ್ವರ ಸರ್ವಸ್ವರ ಬಂಧು||

 

ಬಂದ ಮೂಲ ಬಿಂದುವಿಂದ ಬೆಳದು ನಿಂದ

ವ್ಯೋಮಾಕಾರ ಸೂತ್ರ ಮಾತ್ರ ಅದೇ ಬಿಂದು||

 

ನಾದ ಬ್ರಹ್ಮ ಶಬ್ದ ನಾದ ನೀನಾದ ನಾನಾದ

ನಾ ನಾ ನಾದ ಸರಿಗಮ ನಾದ ಓಂಕಾರಬಿಂದು||

 

ಬಿಂದು ರೂಪ ಅನಂತ ಸ್ವರೂಪ ಪರಾಪರ ರೂಪ

ಅದು ಮನು ಸಿಂಧು ನೀ ಮನಸಾಗು ಅದರಲ್ ಯಂದು||

 

ಬಿಂದು ಕೇಂದ್ರ ಬಿಂದು ಯಂದ್ಯಂದು

ಅಂದು ಇಂದು ಮುಂದು ಒಂದೆ ಬಿಂದು||

 

ಡಾ| ಮಹಾದೇವ್ ಭಟ್, ಮಯಾಮಿ, ಫ್ಲೊರೀಡಾ 

3/24/2016

Recent Posts