ಶಾಲಿನಿ ಉಮೇಶ್
ಕನ್ನಡ ಕಂಪನು ಮೆರೆಸಿದ ಕೂಟ
ಎಲ್ಲರೊಡನೆ ಭಾಂದವ್ಯ ಬೆಳೆಸಿದ ಕೂಟ
ಸಹೃದಯಿಗಳು ಒಡನಾಡಿದ ಕೂಟ
ಇದು ನಮ್ಮೆಲ್ಲರ ಒಲುಮೆಯ ನಂದಿ ಕೂಟ.
ತವರು ಮನೆಯ ನೆನಪಾಗಿಸುವ ಕೂಟ
ವಾತ್ಸಲ್ಯ, ಕಾಳಜಿ ತೋರುವ ಹಿರಿಯರಿರುವ ಕೂಟ
ಅಕ್ಕರೆ ತೋರುವ ಸಹೋದರ, ಸಹೋದರಿಯರ ಕೂಟ
ಎಲ್ಲಕ್ಕೂ ಮಿಗಿಲಾಗಿ ಸ್ನೇಹ ಪಸರಿಸಿದ ಕೂಟ.
ಸಂಕ್ರಾಂತಿಯಲ್ಲಿ, ವನ ಭೋಜನ ಉಣಿಸಿದ ಕೂಟ
ಹಳ್ಳಿಯ ಸಂಸ್ಕ್ಕತಿ ಯ ತೋರಿಸಿದ ಕೂಟ
ಮಕ್ಕಳಿಂದ ಎಳ್ಳು ಬೆಲ್ಲ ಬೀರಿಸಿದ ಕೂಟ
ನಮಗೆಲ್ಲ ಬಾಲ್ಯವ ನೆನಪಿಸಿ ಗುಂಪಿನಾಟ ಆಡಿಸಿದ ಕೂಟ.
ಯುಗಾದಿಯಲ್ಲಿ, ಬೇವು, ಬೆಲ್ಲ ಹಂಚಿದ ಕೂಟ
ಹಸಿರು ತಳಿರು ತೋರಣ ತೊಟ್ಟ ಕೂಟ
ಒಬ್ಬಟ್ಟಿನ ಸಿಹಿ ಉಣಿಸಿದ ಕೂಟ
ಕನ್ನಡ ಹಾಡಿನ ಸವಿ ಗಾನ ಸುಧೆ ಕೊಟ್ಟ ಕೂಟ.
ಗಣೇಶ ಚತುರ್ಥಿಯಲ್ಲಿ, ಭಕ್ತಿ ಮೂಡಿಸಿದ ಕೂಟ
ಮಕ್ಕಳಿಂದ ವಿನಾಯಕನ ಪೂಜೆ ಮಾಡಿಸಿದ ಕೂಟ
ವಿಘ್ನರಾಜನ ಮೆರವಣಿಗೆ ಮಾಡಿದ ಕೂಟ
ಮಕ್ಕಳ ಪ್ರತಿಭೆ ಜಗಕೆ ಪರಿಚಯಿಸಿದ ಕೂಟ.
ದೀಪಾವಳಿಯಲ್ಲಿ, ಎಲ್ಲೆಲ್ಲು ದೀಪ ಬೆಳಗಿಸಿದ ಕೂಟ
ವೈಭವೋಪೇತ ಯಕ್ಷಗಾನವನು ಪರಿಚಯಿಸಿದ ಕೂಟ
ಮಹಿಳೆಯರ ಉತ್ಸಾಹ, ಉಲ್ಲಾಸ ಪ್ರದರ್ಶಿಸಿದ ಕೂಟ
ತಾಯ್ನಾಡಿನ ಕಲಾವಿದರ ಒಡನಾಟ ಕೊಟ್ಟ ಕೂಟ.
ರಾಜ್ಯೋತ್ಸವದಲ್ಲಿ, ಭುವನೇಶ್ವರಿಯ ಪೂಜಿಸಿದ ಕೂಟ
ಹೆಮ್ಮೆಯ ಕನ್ನಡ ಬಾವುಟ ಬೆಳಗಿದ ಕೂಟ
ಪದಾಧಿಕಾರಿಗಳು ನಿಸ್ವಾರ್ಥ ಸೇವೆ ಮಾಡಿದ ಕೂಟ
ಇದುವೆ ನೋಡು ನಮ್ಮೆಲ್ಲರ ನಂದಿ ಕನ್ನಡ ಕೂಟ.
Comments