ಪ್ರೊ. ಮಹಾದೇವ ಭಟ್
"ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು," ಎಂಬ ರಾಷ್ಟ್ರಕವಿ ಕುವೆಂಪು ಅವರ ಕನ್ನಡೋತ್ಥಾನದಧೀಮಂತ ಕರೆ ಕನ್ನಡಿಗರಿಗೆಲ್ಲ ಚಿರಪರಿಚಿತ. "ಸಾವಿರ ಯೋಜನ ಬಂದರು ದಾಟಿ, ಕನ್ನಡ ಅಭಿಮಾನಕೆ ನಮಗಿಲ್ಲ ಸಾಟಿ," ಎಂದು ಅಂದುನಂದಿ ಕನ್ನಡ ಕೂಟದ ದಶಮಾನೋತ್ಸವದ ಸಮಯದಲ್ಲಿ (2016), ನಾನೇ ಹೇಳಿದ ಮಾತು ನನಗೆ ನೆನಪಿಗೆ ಬರುತ್ತಿದೆ. ಕಳೆದ 50 ವರ್ಷಗಳಿಂದ ಕನ್ನಡಿಗರು ದಕ್ಷಿಣ ಫ್ಲೋರಿಡಾದಲ್ಲಿ ನೆಲಸಿದ್ದಾರೆ. ಈ ಅವಧಿಯಲ್ಲಿ ಕನ್ನಡಿಗರು ತಮ್ಮ ಭಾಷೆ, ಸಂಸ್ಕೃತಿ, ಆಚಾರ-ವಿಚಾರ, ಕ್ರೀಡೆ-ಕಲೆ, ಮತ್ತು ಸಂಘಟನೆಯನ್ನು ಹೇಗೆ ಬೆಳೆಸಿಕೊಂಡು ಬಂದರೆಂದು ನೋಡೋಣ.
1970ರ ದಶಕದಲ್ಲಿ ಅಲ್ಲೊಂದು ಇಲ್ಲೊಂದು ಕನ್ನಡ ಕುಟುಂಬವು ದಕ್ಷಿಣ ಫ್ಲೋರಿಡಾಕ್ಕೆ ಬೇರೆ ಬೇರೆ ಉದ್ಯೋಗಳನ್ನು ಅವಲಂಬಿಸಿಬರಲು ಆರಂಭಿಸಿತು. ಆಗ ಯಾವುದೇ ಸಂಘಟನೆ ಅಥವಾ ಸಂಸ್ಥೆಗಳು ಇರಲಿಲ್ಲ. ಯಾರದೋ ಒಬ್ಬರ ಮನೆಯಲ್ಲಿ ಸೇರಿಕೊಂಡು ಕನ್ನಡಿಗರು ಹಬ್ಬ ಹರಿದಿನಗಳನ್ನು ಆಚರಿಸುತ್ತಿದ್ದರು. ವರ್ಷಕ್ಕೊಮ್ಮೆ ಪುರಂದರ ಸಂಗೀತದ ಕಾರ್ಯಕ್ರಮವನ್ನೂ ನಡೆಸುತ್ತಿದ್ದರು.
1990ರ ದಶಕ ಬರುತ್ತಿದ್ದಂತೆ ಕನ್ನಡಿಗರ ಸಂಖ್ಯೆಯು ಬೆಳೆಯುತ್ತ ಹೋಯಿತು. ಸೌತ್ ಈಸ್ಟ್ ಫ್ಲೋರಿಡಾ, ಟ್ಯಾoಪಾ ಮತ್ತುಒರ್ಲ್ಯಾಂಡೊ ಕನ್ನಡಿಗರೆಲ್ಲ ಸೇರಿ ಸುಮಾರು 1992ನೇ ಇಸ್ವಿಯಲ್ಲಿ ಶ್ರೀಗಂಧ ಕನ್ನಡ ಕೂಟವನ್ನು ಸ್ಥಾಪಿಸಿದರು. ರಾಗಿಣಿ ಧರ್ಮಪ್ಪ, ರೇವತಿಅಯಂಗಾರ್, ಗೀತಾ ನಾಗರಾಜ್ ಇವರೆಲ್ಲ ನಮ್ಮ ಭಾಗದಿಂದ ಶ್ರೀಗಂಧ ಕೂಟದ ಕಾರ್ಯಕಾರಿ ಮಂಡಳಿಯಲ್ಲಿ ಪ್ರತಿನಿಧಿಗಳಾಗಿ ಕೆಲಸಮಾಡಿದ್ದಾರೆ. ಪ್ರತಿ ವರ್ಷವೂ ಶ್ರೀಗಂಧ ಕನ್ನಡ ಕೂಟವು ಒಂದು ಕಡೆ ಸೇರುತ್ತಿತ್ತು. ನಾನು ಭಾಗವಹಿಸಿದ ಮೊದಲ ಕಾರ್ಯಕ್ರಮವೆಂದರೆ1995ರಲ್ಲಿ ವೆಸ್ಟ್ ಪಾಮ್ ಬೀಚ್ ಅಲ್ಲಿ. ರಘು ದೇಶಪಾಂಡೆ, ರಾಮಾನುಜ ಅಯಂಗಾರ್, ಪಂಪ ನರಸೀಪುರ, ಹಾಗು ಮೃತ್ಯುಂಜಯಇವರೆಲ್ಲ ಸ್ತ್ರೀ ವೇಷದಲ್ಲಿ, "ನಮ್ಮ ಮನೆ ಅಂಗಳದಲ್ಲಿ ನಿನ್ನ ಕೆಲಸ ಏನಿದೆ...," ಎಂಬ ಪದ್ಯಕ್ಕೆ ಡಾನ್ಸ್ ಮಾಡಿ ಜನರನ್ನು ನಕ್ಕಿಸಿದ್ದು ಇಂದಿಗೂನೆನಪಿದೆ. 1996 ರಲ್ಲಿ ಟ್ಯಾoಪಾದಲ್ಲಾದ ಮಾಸ್ಟರ್ ಹಿರಣ್ಯಯ್ಯ ಅವರ ನಾಟಕಕ್ಕೆ ಸೌತ್ ಫ್ಲೋರಿಡಾದಿಂದ ನಾವು ಹತ್ತಾರು ಕುಟುಂಬಗಳುಹೋಗಿದ್ದೆವು. ಉತ್ತಮವಾದ ಕನ್ನಡ ಕಾರ್ಯಕ್ರಮಗಳಿದ್ದರೆ, "ದೂರದ ಮಿತಿ" ಕನ್ನಡಿಗರಿಗೆ ಇರಲಿಲ್ಲ. 2004ರಲ್ಲಿ ಶ್ರೀಗಂಧ ಕನ್ನಡ ಕೂಟದಆತಿಥ್ಯದಲ್ಲಿ ಅಕ್ಕ (AKKA ) ಸಮ್ಮೇಳನವು ಒರ್ಲ್ಯಾಂಡೊದಲ್ಲಿ ನಡೆಯಿತು. ಆಗ ರಾಗಿಣಿ ಧರ್ಮಪ್ಪ ಅವರು ಶ್ರೀಗಂಧ ಕೂಟದ ಅಧ್ಯಕ್ಷೆ.ಸಮ್ಮೇಳನದ ಮೂರುದಿನಗಳ ಸಮಯದಲ್ಲಿಯೇ ಹರಿಕೇನ್ ಫ್ರಾನ್ಸಿಸ್ ಫ್ಲೋರಿಡಾ ರಾಜ್ಯದಮೇಲೆ ಧಾಳಿ ಮಾಡಿತ್ತು. ಧೈರ್ಯಗುಂದದೆ700ಕ್ಕೂ ಹೆಚ್ಚು ಕನ್ನಡಿಗರು ದೇಶದ ನಾನಾ ಭಾಗದಿಂದ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಆಶಾ ನರಸೀಪುರ, ರೇವತಿ ಅಯಂಗಾರ್ ಹಾಗು ಸಂಗಡಿಗರು (ಸುಮಾರು 1992)
(ಛಾಯಾಚಿತ್ರ: ಶ್ರೀರಂಜಿನಿ ರಾಜಾ ಸಂಗ್ರಹ)
ರಶ್ಮಿ ಮತ್ತು ವಿವೇಕ್ ಮೂರ್ತಿ
(ಛಾಯಾಚಿತ್ರ: ಶ್ರೀರಂಜಿನಿ ರಾಜಾ ಸಂಗ್ರಹ)
(ವಿವೇಕ್ ಈಗ US Surgeon General ಆಗಿದ್ದಾರೆ)
Y2K ಸಮಯದಲ್ಲಿ ಸೌತ್ ಫ್ಲೋರಿಡಾದಲ್ಲಿ ಕನ್ನಡಿಗರ ಸಂಖ್ಯೆ ಬೆಳೆಯುತ್ತಲೇ ಹೋಗಿತ್ತು. 'ನಮ್ಮ ಭಾಗದಲ್ಲಿ ನಮ್ಮದೇ ಒಂದುಕನ್ನಡ ಸಂಘವನ್ನು ಯಾಕೆ ಸ್ಥಾಪಿಸಬಾರದು,' ಎಂಬ ಆಸೆ ಜನರಲ್ಲಿ ಮೂಡಿತ್ತು. ಸೌತ್ ಈಸ್ಟ್ ಫ್ಲೋರಿಡಾದ ಕನ್ನಡ ಸಮಾಜದ ಹಿರಿಯರೆಲ್ಲಸೇರಿ, 2006 ಅಕ್ಟೊಬರ್ ತಿಂಗಳದಲ್ಲಿ ನಂದಿ ಕನ್ನಡ ಕೂಟದ ಸ್ಥಾಪನೆಗೆ ಅಡಿಯಾದರು; ಕೂಟದ ನೋಂದಣಿಯೂ ಆಯಿತು. ಶ್ರೀಗಂಧಕನ್ನಡ ಕೂಟದವರು ನಮ್ಮ ಈ ನಿರ್ಧಾರಕ್ಕೆ ಸಂಪೂರ್ಣ ಪ್ರೋತ್ಸಹವನ್ನು ಕೊಟ್ಟಿದ್ದು ಸ್ಮರಣೀಯ. ಅದೇ ನವೆಂಬರ್ ತಿಂಗಳಲ್ಲಿ ಶಿವಾ-ವಿಷ್ಣುದೇವಸ್ಥಾನದ ಸಭಾಂಗಣದಲ್ಲಿ ಟ್ಯಾoಪಾದ ಡಾ. ರೇಣುಕಾ ರಾಮಪ್ಪ ಅವರಿಂದ ನಂದಿ ಕನ್ನಡ ಕೂಟದ ಸಾಂಪ್ರದಾಯಿಕ ಉದ್ಘಾಟನೆ.ಕೂಟದ ಪ್ರಥಮ ಪದಾಧಿಕಾರಿಗಳು: ರಮಾ ಸುರೇಶ (ಅಧ್ಯಕ್ಷೆ), ರಶ್ಮಿ ಶಶಿ (ಉಪಾಧ್ಯಕ್ಷೆ), ಶ್ರೀರಂಜಿನಿ ರಾಜಾ (ಕಾರ್ಯದರ್ಶಿ), ಗಂಗಾಧರ್ಚಿಟ್ಲೂರ್ (ಖಜಾಂಚಿ), ಮತ್ತು ಮಹಾದೇವ ಭಟ್ (ನಿರ್ದೇಶಕ). ವಕೀಲ ಭವಾನಿ ನಿರ್ಮಲ್ ಅವರು ಕೂಟದ ನಿಯಮಾವಳಿಗಳನ್ನು ರಚಿಸಿ,ಹಲವು ವರ್ಷ ನಮ್ಮ ಕಾನೂನು ಪ್ರತಿನಿಧಿಯಾಗಿ ಕೆಲಸ ನಿರ್ವಹಿಸಿದ್ದಾರೆ. ತದನಂತರದ 16 ವರ್ಷಗಳಲ್ಲಿ ಶ್ರೀರಂಜಿನಿ ರಾಜಾ, ಗೋವಿಂದರಾಜ್ ರಂಗಸ್ವಾಮಿ, ರಂಜನಿ ಬಸವನಹಳ್ಳಿ, ಮಹಾದೇವ ಭಟ್, ಅರ್ಚನಾ ಕುಲ್ಕರ್ಣಿ, ಮಹೇಶ್ ಜೋಶಿ, ಮೈಥಿಲಿ ಮೂರ್ತಿ, ಶಾಲಿನಿ ಉಮೇಶ್, ಹಾಗು ಪ್ರಸ್ತುತದಲ್ಲಿ ರವೀಂದ್ರ ಶ್ರೀನಿವಾಸ್ ಕೂಟದ ಅಧ್ಯಕ್ಷರುಗಳಾಗಿ ಕಾರ್ಯನಿರ್ವಹಿಸಿಕೊಂಡು ಬಂದಿದ್ದಾರೆ.
ನಂದಿ ಕನ್ನಡ ಕೂಟದ ಮೊದಲ ಆಡಳಿತ ಮಂಡಳಿ (2006)
ಗಂಗಾಧರ್, ಮಹಾದೇವ, ರಮಾ, ಶ್ರೀರಂಜಿನಿ, ಮತ್ತು ರಶ್ಮಿ
(ಛಾಯಾಚಿತ್ರ: ಶ್ರೀರಂಜಿನಿ ರಾಜಾ ಸಂಗ್ರಹ)
ನಂದಿ ಕನ್ನಡ ಕೂಟದ ಪ್ರಧಾನಉದ್ದೇಶವೆಂದರೆ ನಾವು ನೆಲೆಸಿರುವ ಸೌತ್ಫ್ಲೋರಿಡಾ ತಾಣದಲ್ಲಿ ಕನ್ನಡ ಸಂಸ್ಕೃತಿ ಬೆಳೆಯಬೇಕು; ಅಲ್ಲದೆ ಇಲ್ಲೆಯೇ ಹುಟ್ಟಿ ಬೆಳೆಯುತ್ತಿರುವ ನಮ್ಮ ಮಕ್ಕಳಿಗೆ, ಅವರ ಮೂಲ ಕನ್ನಡಸಂಸ್ಕೃತಿಯ ವಿಶೇಷತೆ ತಿಳಿದಿರಬೇಕು ಎಂದು. ಈ ದಿಶೆಯಲ್ಲಿ ವಿವಿಧ ರೀತಿಯ ಚಟುವಟಿಕೆಗಳನ್ನು ನಂದಿ ಕನ್ನಡ ಕೂಟ ನೆಡೆಸಿ ಕೊಂಡುಬಂದಿದೆ. ಕನ್ನಡಿಗರಿಗೆ ಸಂಕ್ರಾಂತಿ, ಯುಗಾದಿ, ಗೌರಿ-ಗಣೇಶ ಹಾಗು ದೀಪಾವಳಿ ಇವು ಪ್ರಮುಖ ನಾಡ ಹಬ್ಬಗಳು. ಇವುಗಳ ಆಚರಣೆಯಿಂದನಮ್ಮ ಮನಸ್ಸು ಮತ್ತು ಹೃದಯ ಎರಡೂ ಹಸನವಾಗುವುದು ನಿಜ. ಜನರೆಲ್ಲಾ ಒಟ್ಟಾಗಿ ಈ ಹಬ್ಬಗಳನ್ನು ಆಚರಿಸಿದಾಗ ಸ್ನೇಹಮಯವಾತಾವರಣವು ಬೆಳೆಯುತ್ತದೆ. ಕೂಟವು ಕಳೆದ 18 ವರ್ಷಗಳಿಂದ ನಮ್ಮ ನಾಡ ಹಬ್ಬಗಳನ್ನು ಸಾಂಪ್ರದಾಯಿಕವಾಗಿ ಮಾಡುವ ಎಲ್ಲಪ್ರಯತ್ನವನ್ನು ಮಾಡುತ್ತ ಬಂದಿದೆ. ಸಂಕ್ರಾಂತಿ ಹಬ್ಬದಲ್ಲಿ ಜಾನಪದದ ಸೊಗಡು ಇದ್ದರೆ, ಯುಗಾದಿ ಮತ್ತು ದೀಪಾವಳಿಯಲ್ಲಿ ಸಾಂಸ್ಕೃತಿಕಮತ್ತು ಸಾಂಪ್ರದಾಯಿಕ ಆಚರಣೆ; ಗೌರಿ-ಗಣೇಶರ ಹಬ್ಬದಲ್ಲಿ ಮೆರವಣಿಗೆ-ಪೂಜೆಗಳನ್ನ ನೋಡಬಹುದು.
ಸಂಕ್ರಾಂತಿಯ ಸಡಗರದ ಸುಗ್ಗಿ
(ಛಾಯಾಚಿತ್ರ: NKK ಸಂಗ್ರಹ)
ಮೆರವಣಿಗೆ
(ಛಾಯಾಚಿತ್ರ: NKK ಸಂಗ್ರಹ)
ಕನ್ನಡ ಸಾಹಿತ್ಯ ಮತ್ತುಕಲೆಗಳನ್ನು ಫ್ಲೋರಿಡಾದಲ್ಲಿಪ್ರೋತ್ಸಾಹಿಸಲು ನಂದಿ ಕನ್ನಡ ಕೂಟವು ಸರ್ವ ಪ್ರಯತ್ನ ಮಾಡಿದೆ. ಕನ್ನಡ ನಾಡಿನಹೆಸರಾಂತ ಕವಿ-ಕಲಾವಿದರನ್ನು ಕರೆಸಿಹಲವು ಕಾರ್ಯಕ್ರಮಗಳನ್ನು ಕೂಟವುನಡೆಸಿದೆ. ಡಾ. ಎಸ್ ಎಲ್. ಭೈರಪ್ಪಸುಮಾರು 1991 ರಲ್ಲಿ ನಮ್ಮಲ್ಲಿಗೆಬಂದಿದ್ದರು. ಡಾ. ಲಕ್ಷ್ಮೀನಾರಾಯಣಭಟ್ಟರು "ಕನ್ನಡ ಸಾಹಿತ್ಯ ಇತಿಹಾಸ" ಎಂಬ ಮಾಲಿಕೆಯನ್ನು ಬರೆದು ಪ್ರಕಟಿಸುವಾಗ ಅಮೇರಿಕಾದ್ಯಂತ ಪ್ರವಾಸ ಮಾಡಿದ್ದರು. ಅವರನ್ನು ನಮ್ಮಲ್ಲಿಗೂ ಕರೆಸಿ ಮೂರೂ ದಿವಸದಿನವಿಡೀ ಪ್ರವಚನವನ್ನು ನೆರೆವೇರಿಸಿದ್ದೆವು. ಸಂತ ಕೇಶವ ದಾಸರು, ಸರ್ವೋತ್ತಮ ದಾಸರು, ಹಾಗು ಶ್ರೀ ವಿದ್ಯಾಭೂಷಣರಂತಹಹೆಸರಾನ್ವಿತ ವ್ಯಕ್ತಿಗಳು ನಮ್ಮಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅಂತೆಯೇ ಲಘು ಸಂಗೀತ, ಹಾಸ್ಯ ಚಟಾಕಿ, ಸಿನೆಮಾ ಮತ್ತುದೂರದರ್ಶನ, ಹೀಗೆ ಹಲವು ಕ್ಷೇತ್ರಗಳ ಹೆಸರಾಂತ ಕಲಾವಿದರು ನಮ್ಮನ್ನು ರಂಜಿಸಿ ಹೋಗಿದ್ದಾರೆ.
ಕನ್ನಡದ ರಾಜ್ಯ-ದೇಶ-ಭಕ್ತಿ ಪದ್ಯಗಳಲ್ಲೊಂದಾದ "ನಿತ್ಯೋತ್ಸವ" ಕೃತಿಕರ್ತರಾದ, ಪದ್ಮಶ್ರೀ ನಿಸ್ಸಾರ್ ಅಹಮದ್ ನಂದಿ ಕನ್ನಡಕೂಟಕ್ಕೆ ಹಲವು ಬಾರಿ ಭೇಟಿಕೊಟ್ಟರು. ಬ್ರಾವರ್ಡ್-ನಲ್ಲಿ ಅವರ ಸಂಭಂದಿಕರ ಮನೆಗೆ ಆಗಾಗ ಬರುತ್ತಿದ್ದರು. ಬಂದಾಗೆಲ್ಲ ಕನ್ನಡಿಗರನ್ನುಭೇಟಿಮಾಡುವ ಆಸೆ ಅವರದು. ಅವರ ಕೊನೆಯ ಪುಸ್ತಕವೊಂದನ್ನು ನಂದಿ ಕನ್ನಡ ಕೂಟವು ಬಿಡುಗಡೆ ಮಾಡಿತ್ತು. ಅವರ ಪ್ರೇರಣೆಯಿಂದಕೆಲವು ಸ್ಥಳೀಯ ಕನ್ನಡಿಗರು ಪದ್ಯಗಳನ್ನು ರಚಿಸುವಲ್ಲಿ ತೊಡಗಿದ್ದು ಒಂದು ವಿಶೇಷ. ಇದರಿಂದ ಹತ್ತಾರು ಕೃತಿಗಳ ರಚನೆಯಾಗಿವೆ. ಬಹುಶಃನಂದಿ ಕನ್ನಡ ಕೂಟದ ಕಾರ್ಯಕ್ರಮವೇ ಅವರ ಜೀವಿತದ ಕೊನೆಯ ಕಾರ್ಯಕ್ರಮವಿರಬೇಕು. ಇದಾಗಿ ಒಂದು ತಿಂಗಳಲ್ಲಿ ಭಾರತಕ್ಕೆ ಮರಳಿಹೋದವರು, ಕೆಲವೇ ದಿನಗಳಲ್ಲಿ ದೈವಾಧೀನರಾದರು. ಅವರ ನೆನಪು, ಅವರೊಡನೆ ಕಳೆದ ಕೆಲವು ಕ್ಷಣಗಳು ನಮ್ಮಲ್ಲಿ ಹಸಿರಾಗಿಉಳಿದಿವೆ.
ಸಾಂಸ್ಕೃತಿಕ ರಂಗದಲ್ಲಿ ಕೂಟದ ಕೊಡುಗೆ ಅಪಾರ.ಅದರಲ್ಲೂ ಚಿಕ್ಕ ಮಕ್ಕಳಿಗೆ ಹಾಡು, ನೃತ್ಯ, ಚಿತ್ರಕಲೆ, ನಾಟಕ, ಮಿಮಿಕ್ರಿ ಹೀಗೆ ಹಲವು ವಿಧದ ಕಲಾಪ್ರದರ್ಶನಕ್ಕೆ ಕೂಟವುವೇದಿಕೆಯನ್ನು ಕಲ್ಪಿಸಿ ಕೊಟ್ಟಿದೆ. ನಮ್ಮಲ್ಲಿ ಹತ್ತಾರು ಕನ್ನಡಿಗರುಉತ್ತಮವಾದ ಕನ್ನಡ ನಾಟಕ, ನೃತ್ಯ ರೂಪಕ, ಫ್ಯಾಷನ್ ಶೋ, ಸಂಗೀತ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಯಕ್ಷಗಾನ ಕರ್ನಾಟಕದ ಒಂದು ಹೆಸರಾಂತಜಾನಪದ-ಶಾಸ್ತ್ರೀಯ ಕಲೆ. ಅಮೇರಿಕಾದಲ್ಲಿ ಕೇವಲನಾಲ್ಕು-ಐದು ಪಟ್ಟಣಗಳಲ್ಲಿ ಮಾತ್ರ ಕನ್ನಡಕೂಟಗಳು ಸ್ಥಳೀಯ (home-grown) ಯಕ್ಷಗಾನತಂಡಗಳನ್ನು ಪ್ರೋತ್ಸಾಹಿಸಿ ಬೆಳೆಸಿದ್ದಾರೆ. ಅವುಗಳಲ್ಲಿನಂದಿ ಕನ್ನಡ ಕೂಟವು ಸಹ ಒಂದು. ಕಳೆದ 25 ವರ್ಷಗಳಿಂದ ಯಕ್ಷಗಾನ ಕಾರ್ಯಕ್ರಮಗಳನ್ನುನಂದಿ ಕೂಟದ ಮಕ್ಕಳು-ದೊಡ್ಡವರುಪ್ರದರ್ಶಿಸಿದ್ದಾರೆ. 2004ರ ಅಕ್ಕಸಮ್ಮೇಳನದಲ್ಲಿಯೂ ನಮ್ಮ ಮಕ್ಕಳು ಯಕ್ಷಗಾನಆಟವನ್ನು ಆಡಿದ್ದಾರೆ. ಐವತ್ತಕ್ಕೂ ಹೆಚ್ಚು ಮಕ್ಕಳು,ಇಪ್ಪತ್ತಕ್ಕೂ ಹೆಚ್ಚು ದೊಡ್ಡವರು ಈ ಕಲೆಯಲ್ಲಿ ಭಾಗವಹಿಸಿದ್ದು ವಿಶೇಷ. ವೈಯಕ್ತಿಕವಾಗಿ ಹೇಳುವದಾದರೆ, ಇಂತಹ ಕನ್ನಡದ ಶ್ರೇಷ್ಠ ಪುರಾತನಕಲೆಯೊಂದನ್ನು ನನಗೆ ನಿರ್ದೇಶಿಸಿ- ಪ್ರದರ್ಶಿಸುವ ಅವಕಾಶಕೊಟ್ಟ ನಂದಿ ಕನ್ನಡ ಕೂಟಕ್ಕೆ, ನಾನು-ನನ್ನ ತಂಡದವರೆಲ್ಲರೂ ಚಿರಋಣಿಗಳು.
ಒರ್ಲಾಂಡೋದಲ್ಲಿ ನಡೆದ 2004 AKKA ಸಮ್ಮೇಳನದಲ್ಲಿ ನಮ್ಮ ಮಕ್ಕಳು ಯಕ್ಷಗಾನ ಪ್ರದರ್ಶನ ನೀಡಿದಾಗ, ಧಿಗ್ಬ್ರಮೆಯಾದ ಅಂದಿನ ಉಪ ಮುಖ್ಯಮಂತ್ರಿ ಮಾನ್ಯ ಸಿದ್ಧರಾಮಯ್ಯ.
(ಛಾಯಾಚಿತ್ರ: ತಿಳಿಯದು)
ಮಕ್ಕಳಿಂದ ಹುಲಿವೇಷ ಮತ್ತು ಪೌರಾಣಿಕ ನಾಟಕಗಳು
(ಛಾಯಾ ಚಿತ್ರ: NKK ಸಂಗ್ರಹದಿಂದ)
ಶಿವಾ-ವಿಷ್ಣು ದೇವಸ್ಥಾನ ಮತ್ತು ನಂದಿಕನ್ನಡ ಕೂಟದ ಸಾಮರಸ್ಯ ಬಹಳ ವಿಶೇಷ. ಆರಂಭದಿಂದಲೂ ದೇವಸ್ಥಾನವು ಕನ್ನಡಕೂಟದ ಬೆಳೆವಣಿಗೆಗೆ ಪರೋಕ್ಷವಾಗಿಸಹಾಯ ಮಾಡಿದೆ: ಉಚಿತವಾಗಿವರ್ಷಕ್ಕೊಮ್ಮೆ ಸಭಾಂಗಣದ ಬಳಕೆ, ಗಣೇಶನಮೆರೆವಣಿಗೆಗೆ ಬೇಕಾದ ಅವಕಾಶ, ಈ ನಾಡಿಗೆಬಂದ ಹಲವು ಕನ್ನಡಿಗರು ಮೊದಲುಇತರರನ್ನು ಭೇಟಿಯಾಗುವ ಅವಕಾಶ, ಹೀಗೆ ಹಲವಾರು ರೀತಿಯಲ್ಲಿ. 2010ರಲ್ಲಿ ಶಿವಾ-ವಿಷ್ಣು ದೇವಸ್ಥಾನದ ವಿದ್ಯಾ ಮಂದಿರವು ಮಕ್ಕಳಿಗೆಪ್ರತಿ ಭಾನುವಾರ ಕನ್ನಡ ಭಾಷೆಯನ್ನು ಕಲಿಸಲು ಆರಂಭಿಸಿತು. ಕನ್ನಡವನ್ನು ಕಲಿಸಲು ನಂದಿ ಕನ್ನಡ ಕೂಟದ ಹಲವು ಮಹಿಳೆಯರುಮುಂದಾಗಿ ಬಂದರು. ರಾಗಿಣಿ ಅವರಿಂದ ಆರಂಭವಾಗಿ, ಅರ್ಚನಾ, ಶಾಲಿನಿ, ಆಶಾ ಶೆಟ್ಟಿ, ಭಾರತೀ ಸಿದ್ದೇಗೌಡ, ಯಶೋಧ ನಟರಾಜ್, ರಂಜನಿ, ಶ್ರೀರಂಜನಿ ಸಚ್ಚಿದಾನಂದ, ಹಾಗು ವಿಮಲಾ ಕೃಷ್ಣಮೂರ್ತಿ ಅವರುಗಳು ಸುಮಾರು ಹತ್ತು ವರ್ಷಗಳ ಕಾಲ ಕನ್ನಡ ಶಿಕ್ಷಣವನ್ನುನೂರಾರು ಮಕ್ಕಳಿಗೆ ಕೊಡುತ್ತ ಬಂದರು. ಸುಮಾರು 2020ರ ಹೊತ್ತಿಗೆ ನಾಗರಾಜ್ ನಾಗತಿಹಳ್ಳಿ ಅವರ ನೇತೃತ್ವದಲ್ಲಿ "ಕನ್ನಡ ಕಲಿ" Online ಶಾಲೆಯು ಆರಂಭವಾಗಿ, ಇನ್ನೂ ರಚನಾತ್ಮಕ ಮತ್ತು ಅಧೀಕೃತ ಕನ್ನಡ ಶಿಕ್ಷಣವು ಮಕ್ಕಳಿಗೆ ದೊರೆಯುವಂತೆ ಆಯಿತು. ಭಾರತದ ಮಾಜಿಪ್ರಧಾನ ಮಂತ್ರಿ ಶ್ರೀಯುತ ದೇವೆ ಗೌಡರು ಕನ್ನಡ ಕಲಿ ಶಾಲೆಯ ಉದ್ಘಾಟನೆಯ ಸಂಧರ್ಭದಲ್ಲಿ ಸ್ವತಃ ಹರಸಿದ್ದು ನಮ್ಮೆಲ್ಲರ ಸುದೈವ. ಸದ್ಯಕ್ಕೆ ಸುಮಾರು ನಲವತ್ತು ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಹತ್ತಾರು ಪಾಲಕರು ಕನ್ನಡವನ್ನು ಕಲಿಸುತ್ತಿದ್ದಾರೆ.
ಕನ್ನಡ ಶಾಲೆಯ ಮಕ್ಕಳಿಂದ ಪದ್ಯ
(ಛಾಯಾ ಚಿತ್ರ: NKK ಸಂಗ್ರಹದಿಂದ)
ಮೇಸ್ಟ್ರು ಅಶೋಕ ಅವರ ನಿಧರ್ಶನದಲ್ಲಿ ಕನ್ನಡ ಕಲಿ ಶಾಲೆಯ ಮಕ್ಕಳಿಂದ ನಾಟಕ
(ಛಾಯಾ ಚಿತ್ರ: NKK ಸಂಗ್ರಹದಿಂದ)
ರಂಗು ರಂಗಿನ ನಂದಿಯ ಕಲಾ ರಂಗ:
ಯಕ್ಷಗಾನ, ಹಾಸ್ಯ ನಾಟಕ, ಜಾನಪದ, ನೃತ್ಯ ರೂಪಕಗಳನ್ನು ನಮ್ಮವರುಪ್ರದರ್ಶಿಸಿದ್ದಾರೆ
(ಛಾಯಾ ಚಿತ್ರ: NKK ಸಂಗ್ರಹದಿಂದ)
ಕ್ರೀಡೆಗೂ ಸಹ ಕೂಟವು ಪ್ರಮುಖ ಸ್ಥಾನವನ್ನು ಕೊಟ್ಟಿದೆ. ಕ್ರಿಕೆಟ್ ಪ್ರತಿ ವರ್ಷ ಸಂಕ್ರಾಂತಿ ಹಬ್ಬದಲ್ಲಿ ಇದ್ದೇ ಇರುತ್ತದೆ. ಆಟ, ಸೆಣಸಾಟಗಳ ಮಧ್ಯದಲ್ಲೂ ಜನರ ನಡುವೆ ಪ್ರೀತಿ ಬಾಂಧವ್ಯವನ್ನು ಕಾಣಬಹುದು. ನಂದಿ ಕೂಟವು ಒಮ್ಮೆ ಸ್ಥಳೀಯ ಲೀಗ್ನಲ್ಲಿ ಚಾಂಪಿಯನ್ ಕೂಡಾ ಆಗಿತ್ತು. ನಂದಿ ಕೂಟವು ಅಮೇರಿಕಾದ ದೇಶ-ಮಟ್ಟದಲ್ಲೂ ಹಲವು ರೀತಿಯಲ್ಲಿ ತನ್ನ ಪ್ರಭಾವನ್ನು ಬೀರಿದೆ. ಶ್ರೀರಂಜಿನಿ, ರಾಗಿಣಿ, ಪದ್ಮಜಾ ಗೋವಿಂದರಾಜ್ ಹಾಗೆ ಇನ್ನೂ ಹಲವು ಸದಸ್ಯರು AKKA ಸಮ್ಮೇಳನದ ಮೆರವಣಿಗೆಗಳಲ್ಲಿ ನಂದಿ ಕನ್ನಡ ಕೂಟದ ಫಲಕವನ್ನು ಎತ್ತಿ ಹಿಡಿದಿದ್ದಾರೆ. ನಂದಿ ಕೂಟದ ಸದಸ್ಯರಿಂದ ಹಾಗು-ಮಕ್ಕಳಿಂದ ಪದ್ಯ-ನೃತ್ಯ ಕಾರ್ಯಕ್ರಮಗಳನ್ನು ಮಾಡಿಸಿದ್ದಾರೆ. ಹಿಂದೆ ಶ್ರೀರಂಜಿನಿ ಮತ್ತು ಸದ್ಯಕ್ಕೆ ನಾಗರಾಜ್ ನಾಗತಿಹಳ್ಳಿ AKKA ಆಡಳಿತ ಮಂಡಳಿಯಲ್ಲಿದ್ದು, ನಂದಿ ಕೂಟದ ಹಲವು ಸದಸ್ಯರಿಗೆ ದೇಶದ ಮಟ್ಟದಲ್ಲಿ ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ. ಜಾಗತಿಕ ಮಟ್ಟದ ನಾವಿಕ ಕನ್ನಡ ಸಂಸ್ಥೆಗೆ, ನಂದಿ ಕೂಟದ ಸದಸ್ಯರುಗಳಾದ ಅನು ಭಟ್ ಮುಂಬರುವ ವರ್ಷದ ಅಧ್ಯಕ್ಷೆ (President Elect), ಮತ್ತು ಮೈಥಿಲಿ ಮೂರ್ತಿ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ನಮ್ಮ ತಂಡದ Tug of War ಆಟದಲ್ಲಿ ಗೆಲ್ಲುವವರು ಮಕ್ಕಳೇ!
(ಛಾಯಾ ಚಿತ್ರ: NKK ಸಂಗ್ರಹದಿಂದ)
"ಕಪ್ಪಿಲ್ಲದಿದ್ದರೇನು, ಬಾಟಲಿಯ ಚಿಪ್ಪನ್ನೇ "ಕಪ್ಪು" ಮಾಡಿಬಿಡುತ್ತೇವೆ," ಎನ್ನುತ್ತಾರೆ ನಮ್ಮವರು
(ಛಾಯಾ ಚಿತ್ರ: NKK ಸಂಗ್ರಹದಿಂದ)
ಈ ವರ್ಷವೂ ಕಪ್ಪು ಗೆದ್ದವರದ್ದೇ! (2024)
(ಛಾಯಾಚಿತ್ರ: ಅಹನಾ ತಿಪ್ಪನಗೌಡರ್)
ಯಾವುದೇ ಸಂಘಟನೆಯು ಒಂದುಕ್ರಿಯಾತ್ಮಕವಾದ ಸಂಸ್ಥೆಯಾಗಿ ಬೆಳೆಯಲುಹಲವರ, ಹಲವು ರೀತಿಯ ಶ್ರಮ ಬೇಕು. ಸಂಸ್ಥೆಯನಿಯಮಾವಳಿಗಳನ್ನು ತಪ್ಪದೆ ಪಾಲಿಸುವನಿಟ್ಟಿನಲ್ಲಿ, ಹೊಸ ನಿರ್ದೇಶಕ - ಸದಸ್ಯರಿಗೆಲ್ಲಯೋಗ್ಯವಾದ ಸಲಹೆಗಳನ್ನು ಕೊಡುವಲ್ಲಿ ಹಿರಿಯಸದಸ್ಯರುಗಳ ಪಾತ್ರ ಮುಖ್ಯ. "ಹೊಸ ಚಿಗರು ಹಳೆಬೇರು ಕೂಡಿರಲು ಮರ ಸೊಬಗು" ಎಂಬ ಡಿವಿಜಿಅವರ ಮಾತು ಕೂಟದ ಬೆಳೆವಣಿಗೆಗೆಮಾರ್ಗಸೂಚಿ ಆಗಿದೆ. ನಂದಿ ಕನ್ನಡ ಕೂಟವು ನಿಜವಾಗಿಯೂ "ವಸುದೈವ ಕುಟುಂಬಕವೇ." ಹೊಸತಾಗಿ ಪ್ರತಿವರ್ಷ ಪಟ್ಟಣಕ್ಕೆ ಬರುವ ಹೊಸಕನ್ನಡಿಗರಿಗೆ ನಂದಿ ಕನ್ನಡ ಕೂಟದ ದ್ವಾರವುಮುಕ್ತವಾಗಿದೆ. ವಿವಿಧ ಕ್ರಿಯಾತ್ಮಕಚಟುವಟಿಕೆಗಳಲ್ಲಿ ಆಸಕ್ತಿ, ಪ್ರತಿಭೆ ಇರುವವರಿಗೆ ಕೂಟದಲ್ಲಿ ಯೋಗ್ಯವಾದ ಮನ್ನಣೆ ಮತ್ತು ಅವಕಾಶಗಳಿವೆ. ಇದಕ್ಕೆ ಕೂಟದ ಸದ್ಯದ ಆಡಳಿತ ಮಂಡಳಿಯೇ ಸಾಕ್ಷಿ!
2024-26 ರ ನಂದಿ ಕನ್ನಡ ಕೂಟದ ಆಡಳಿತ ಮಂಡಳಿ
ಸ್ಮಿತಾ ಗೋವರ್ಧನ್; ಸ್ಮಿತಾ ಅಶ್ವಿನ್, ಕಾವ್ಯ ಗಂಗಾಧರ್, ದಿವ್ಯಾ ಆತ್ರೇಯ, ರವೀಂದ್ರ ಶ್ರೀನಿವಾಸ್, ಮಹೇಶ ಮುತಾ, ವೀರೇಂದ್ರ ತಿಪ್ಪನಗೌಡರ್, ಹೇಮಾಂಗ್ ಸುಬ್ರಮಣಿಯನ್
(ಛಾಯಾ ಚಿತ್ರ: NKK ಸಂಗ್ರಹದಿಂದ)
ನಂದಿ ಕೂಟವು ಇಂದು ದಕ್ಷಿಣ ಫ್ಲೋರಿಡಾಕ್ಕೆ ಬರುವ ಕನ್ನಡಿಗರಿಗೆ "home away from home" ಆಗಿದೆ. ಈ ಸಂಸ್ಥೆಯನ್ನು ಬೆಳೆಸಿಉಳಿಸಿಕೊಂಡು ಹೋಗುವುದು ನಮ್ಮೆಲ್ಲರಕರ್ತವ್ಯ.
ಕೃತಜ್ಞತೆಗಳು: ಉಷಾ ಭಟ್, ರೇವತಿ ಅಯಂಗಾರ್, ರಾಗಿಣಿ ಧರ್ಮಪ್ಪ, ಅಶೋಕ ಮಂದೆಗೆರೆ, ಗೋವಿಂದರಾಜ್ ರಂಗಸ್ವಾಮಿ, ಶ್ರೀರಂಜಿನಿರಾಜಾ, ಶ್ರೀಕಾಂತ್ ಮಾವನೂರ್, ಶಾಲಿನಿ ಉಮೇಶ್, ಮೈಥಿಲಿ ಮೂರ್ತಿ, ಅರ್ಚನಾ ಕುಲ್ಕರ್ಣಿ, ರಂಜನಿ ಬಸವನಹಳ್ಳಿ ಮತ್ತು ರವೀಂದ್ರ ಶ್ರೀನಿವಾಸ್ ಇವರೆಲ್ಲರೂ ಈ ಲೇಖನ ರಚನೆಗೆ ಸಲಹೆಗಳನ್ನು ಕೊಟ್ಟಿದ್ದಾರೆ.
Comments