top of page
Search

ಸಾಗರದಾಚೆಯ ನಮ್ಮ ಮನೆ

ದಿವ್ಯ ಆತ್ರೇಯ


ನಾವು Milwaukee ಇಂದ Florida ಗೆ 2020 - August ನಲ್ಲಿ ಬಂದು settle ಆದೆವು. ಆಗಿನ್ನೂ Covid ಬಹಳವಾಗಿ ಇದ್ದಿದ್ದರಿಂದ ಹೆಚ್ಚು ಜನರ ಪರಿಚಯ ಆಗಿರಲಿಲ್ಲ. 16 ವರ್ಷಗಳವರೆಗೂ ನಮ್ಮ ಮನೆಯಾಗಿದ್ದ Milwuakee, ಅಲ್ಲಿಯ ಸ್ನೇಹಿತರು, ಅಲ್ಲಿಯ ಮಿಲನ ಕನ್ನಡ ಕೂಟ, ಅಲ್ಲಿಯ ಚಟುವಟಿಕೆಗಳನ್ನೆಲ್ಲ ಬಹಳವಾಗಿ ನೆನಪಿಸಿಕೊಂಡು ಅದೇ ಗುಂಗಲಿದ್ದ ಸಮಯ. ಇಲ್ಲಿ ಹೇಗೋ ಏನೋ ಎನ್ನುವ ಆತಂಕ ಬೇರೆ.

ಆಗ Covid ಸಮಯ. ಇಲ್ಲಿಯೂ ಇನ್ನು ಎಲ್ಲ ಕಾರ್ಯಕ್ರಮಗಳು vitual ಆಗಿ ನಡೆಯುತ್ತಿತ್ತು. 2021 ಸಂಕ್ರಾಂತಿಗೆ ನಂದಿ ಕನ್ನಡ ಕೂಟ (NKK) Board ನವರು ಒಂದು ಹೊಸ ರೀತಿಯ “Drive through" ಸಮಾರಂಭ ಏರ್ಪಡಿಸಿದ್ದಾರೆ ಅಂತ ನಮಗೆ ಗೊತ್ತಾದ ಕೂಡಲೇ ನಾನು ಮತ್ತು ಮನೆಯವರು ಸಂಭ್ರಮದಿಂದ ಹೊರಟೆವು. ನಮ್ಮ ಜನ ಸಿಗುತ್ತಾರೆ ಅನ್ನುವ ಖುಷಿ ಒಂದು ಕಡೆ ಇದ್ದಾರೆ, ಅಯ್ಯೋ ಇವರೆಲ್ಲ ಹತ್ತಾರು ವರ್ಷಗಳಿಂದ ಒಡನಾಟ ಇಟ್ಟುಕೊಂಡಿರುವವರು. ನಮ್ಮ ಹಾಗೆ ಬಹಳ ಜನ ಹೊಸಬರಿರುತ್ತಾರೆ. ನಮ್ಮನ್ನ ಮಾತನಾಡಿಸ್ತಾರಾ ಎನ್ನುವ ಹಿಂಜರಿಕೆ ಮತ್ತೊಂದು ಕಡೆ. ಮನೆಯವರು "You overthink everything!" ಅಂತ ಹಾಸ್ಯ ಮಾಡಿ ಕರೆದುಕೊಂಡು ಹೊರಟರು.

ಆಗಿನ NKK Board ಮೈಥಿಲಿ ಮೂರ್ತಿ ಮತ್ತು ತಂಡದವರು. Drive ಮಾಡಿಕೊಂಡು ಬಂದ ಕೂಡಲೇ ನಮ್ಮ ಮೈಥಿಲಿಯ ನಗು ಮುಖದ, ನಲ್ಮೆಯ ಸ್ವಾಗತ ನನ್ನ ಆತಂಕವನ್ನೆಲ್ಲ ಕರಗಿ ನೀರು ಮಾಡಿತು. ಕೂಟದ ಎಲ್ಲರೂ ನಮ್ಮನ್ನು ಆತ್ಮೀಯತೆಯಿಂದ ಮಾತನಾಡಿಸಿ, ಎಳ್ಳು-ಬೆಲ್ಲ-ಪೊಂಗಲ್ ಗಳನ್ನೂ ಕೊಟ್ಟು, ಯುಗಾದಿ ಕಾರ್ಯಕ್ರಮಕ್ಕೆ ಖಂಡಿತಾ ಬರಬೇಕು ಎಂದು ನಾಲ್ಕಾರು ಸಲ ಹೇಳಿ ಬೀಳ್ಕೊಟ್ಟರು. ಅದಾದ ನಂತರ, ಯುಗಾದಿ ಹಬ್ಬದಲ್ಲಿ ಎಲ್ಲರನ್ನು ಮುಖತಃ ಭೇಟಿ ಮಾಡಿ ಮಾತನಾಡಿಸಿದ ಮೇಲೆ ನಂದಿ ಕನ್ನಡ ಕೂಟದ ಮೇಲೆ ನಮ್ಮ ಅಭಿಮಾನ, ಪ್ರೀತಿ ಇಮ್ಮಡಿಯಾಯಿತು.

ಈಗ ನಾನು ಮತ್ತು ನನ್ನ ಪರಿವಾರ ನಂದಿ ಕೂಟದಲ್ಲಿ ಎಷ್ಟು ಒಂದಾಗಿ ಹೋಗಿದ್ದೇವೆ ಅಂದರೆ, ಇಲ್ಲಿಗೆ ಬಂದು ನಾಲಕ್ಕು ವರ್ಷಕ್ಕೆ, ಈ ಬಾರಿಯ Board ನಲ್ಲಿ Joint Secretary ಯಾಗಿ volunteer ಮಾಡ್ತಾ ಇದ್ದೀನಿ ಅಂತ ಹೇಳುವ ಹೆಮ್ಮೆ ನನ್ನದು.

ಚಿಕ್ಕ ಚೊಕ್ಕ ಸಮುದಾಯ ನಮ್ಮದು. ಎಲ್ಲರೂ ಎಲ್ಲರಿಗೂ ಸಹಾಯ ಮಾಡುವಂಥ ಪ್ರವೃತ್ತಿ ನಮ್ಮದು. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು, ಅದರ ಜೊತೆಗೆ ನಮ್ಮ ಸಮುದಾಯದ ತಳಪಾಯ ಹಾಕಿರುವ ಹಿರಿಯರು ಅಷ್ಟೇ ಮುಖ್ಯ ಎನ್ನುವ ಮನೋಭಾವ ಹೊಂದಿರುವ ಕೂಟ ನಮ್ಮದು. ಎಲ್ಲಿಯೋ ಹುಟ್ಟಿ ಎಲ್ಲಿಯೋ ಬೆಳೆದು ಇಲ್ಲಿ ಬಂದು ಈ ನೆಲೆಯನ್ನು ಮನೆಯಾಗಿ ಮಾಡಿಕೊಂಡಿರುವ ನಮಗೆ, ಈ ರೀತಿಯ ಪ್ರೀತಿಯ ಕನ್ನಡದ ಸಮುದಾಯ ಕೊಡುವ ರಕ್ಷಣೆ, ಪ್ರೀತಿಗಳಿಗೆ ನಾನು ಆಭಾರಿ.

South Florida ಹವಾಮಾನವೋ ಅಥವಾ ಸಮುದ್ರದ ಹತ್ತಿರ ಇರುವ ವಾಸ್ತುವೋ ನಾ ಅರಿಯೆ. ಆದರೆ ಸಾಗರದಷ್ಟೇ ದೊಡ್ಡ ಮನಸ್ಸಿನಿಂದ ಎಲ್ಲರನ್ನು ನಮ್ಮ ಕೂಟಕ್ಕೆ ಸ್ವಾಗತಿಸಿ, ಪ್ರೀತಿ - ಆದರದಿಂದ ಎಲ್ಲರನ್ನು ಕಾಣುವ ನಮ್ಮ ನಂದಿ ಕನ್ನಡ ಕೂಟಕ್ಕೆ ನಾವಂತೂ ಚಿರ ಋಣಿ.

 
 
 

Comments


Commenting on this post isn't available anymore. Contact the site owner for more info.

©2025 by Nandi Kannada Koota of South Florida

  • Instagram
  • Facebook
bottom of page